ಹೊಸನಗರ :ಯುವ ಸಮೂಹವು ರಾಷ್ಟ್ರೀಯ ಐಕ್ಯತೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸಾಗಬೇಕು ಕೊಡಚಾದ್ರಿ ಕಾಲೇಜು ಪ್ರಿನ್ಸಿಪಾಲರಾದ ಶ್ರೀ.ಜಯಪ್ಪ.ಸಿ ಹೇಳಿಕೆ...

ಹೊಸನಗರ

ಯುವ ಸಮೂಹವು  ರಾಷ್ಟ್ರೀಯ ಐಕ್ಯತೆಯನ್ನು ಬಲಗೊಳಿಸುವತ್ತ ಸಾಗಬೇಕು ಎಂದು ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀ.ಜಯಪ್ಪ.ಸಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು."

ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ.20.11.2021 ರಂದು ಸಾಂಸ್ಕೃತಿಕ ವೇದಿಕೆ ಮತ್ತು ಐ.ಕ್ಯು.ಎ.ಸಿ ಸಹಯೋಗದೊಂದಿಗೆ ಆಯೋಜಿಸಿದ ರಾಷ್ಟ್ರೀಯ ಐಕ್ಯತಾ ಸಪ್ತಾಹಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಲ್ಲಿ ಐಕ್ಯತೆ ಮೂಡಿದರೆ ದೇಶದ ಐಕ್ಯತೆ ಸಾಧ್ಯವಾಗುವುದರೊಂದಿಗೆ ಸಪ್ತಾಹದ ಉದ್ದೇಶ ಸಫಲವಾಗುವುದು ಎಂದು  ತಿಳಿಸಿದರು.

ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ.ದಿವಾಕರ ಎಚ್ ಅವರು ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ನಾಡು ನಮ್ಮದಾಗಿದ್ದು ನಾವೆಲ್ಲ ಒಂದೇ ಎಂಬ ಮನೋಭಾವ ಮೂಡಿದರೆ ಐಕ್ಯತೆ ಸಾಧ್ಯವೆಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಡಾ.ಸೌಮ್ಯ.ಕೆ.ಸಿ  ರಾಷ್ಟ್ರೀಯ ಐಕ್ಯತಾ ಸಪ್ತಾಹದಲ್ಲಿನ ವಿವಿಧ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸ್ಪಷ್ಟಪಡಿಸಿದರು. ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ.ಪ್ರತಿಮಾ, ಶ್ರೀ.ರವಿ.ಸಿ.ಎಚ್  ಕಾರ್ಯಕ್ರಮದಲ್ಲಿ ಹಾಜರಿದ್ದು ವಿದ್ಯಾರ್ಥಿಗಳನುದ್ದೇಶಿಸಿ ಮಾತನಾಡಿದರು. ಕುಮಾರಿ ಧನ್ಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು..

ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಆಶ್ವಿತ ನಿರೂಪಿಸಿ, ವಿನೀತ ಪ್ರಾರ್ಥಿಸಿ, ರಶ್ಮಿತ ವಂದಿಸಿದರು.


"ಮಲೆನಾಡ ಸುದ್ಧಿಗಾಗಿ, ಸಂಪರ್ಕವಿರಲಿ ನಮ್ಮ ಜೊತೆಗೆ"

Whats-app group joining link


Post a Comment

Previous Post Next Post