ಹೊಸನಗರ : ದಲಿತ ಸಂಘರ್ಷ ಸಮಿತಿ ಹೆಸರು ದುರ್ಬಳಕೆ ವಿಚಾರ, ಸೂಕ್ತ ಕ್ರಮ ಜರುಗಿಸಲು ಪೊಲೀಸ್ ಠಾಣೆಗೆ ದೂರು ದಾಖಲು!!.

ಹೊಸನಗರ :

ದಲಿತ ಸಂಘರ್ಷ ಸಮಿತಿ ಹೆಸರನ್ನು ಕೆಲವರು ದುರ್ಬಳಕೆ ಮಾಡಿಕೊಂಡು ಶಿವಮೊಗ್ಗ ಜಿಲ್ಲೆಯಲ್ಲಿ ಸಮುದಾಯದವರನ್ನು ಎತ್ತಿಕಟ್ಟಿ,ಅಶಾಂತಿ ಎಬ್ಬಿಸಿ,ಗಲಾಟೆ ಮಾಡಿ ಸೌಹಾರ್ದತೆ ಒಡೆದು,ಬೆದರಿಸುವ ತಂತ್ರವನ್ನು ಹಲವು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿದೆ ಇದನ್ನು ಪ್ರಶ್ನಿಸಲು ಪೊಲೀಸ್ ಅಥವಾ,ಸ್ಥಳೀಯ ನಾಗರೀಕರು ಬಂದರೆ ಅವರ ವಿರುದ್ಧ ಪ್ರತಿಭಟನೆ ಅಥವಾ ಪೊಲೀಸ್ ರ ವಿರುದ್ಧವು ಸಹ ಪ್ರತಿಭಟನೆ ಮಾಡುವುದಾಗಿ ಹೇಳಲಾಗುತ್ತಿದೆ ಇದಕ್ಕೆ ಸಂಬಂಧಿಸಿದಂತೆ ಹೊಸನಗರದಲ್ಲಿ ಒಂದು ಪ್ರಕರಣ ದಾಖಲಾಗಿದ್ದು,ಇವಾಗ ಪ್ರಕರಣ ದಾಖಲಿಸಿದ ಪೊಲೀಸರ ವಿರುದ್ಧ ಕೂಡ ಪ್ರತಿಭಟನೆ ನೆಡೆಸಲು ಸಜ್ಜಾಗಿ ನಿಂತಿದ್ದಾರೆ. ಈಗ ನಕಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಎಂದು ತಿಳಿದು ಬಂದಿದೆ ಅಲ್ಲದೆ ಯಾರು ಕೂಡ ಅಧಿಕೃತ ದಲಿತ ಸಂಘರ್ಷ ಸಮಿತಿ ಹೆಸರನ್ನು ಉಲ್ಲೇಖ ಮಾಡಬಾರದು  ಎಂದು ಭದ್ರಾವತಿ 4 ನೇ ಹೆಚ್ಚುವರಿ ನ್ಯಾಯಾಲಯದ ಆದೇಶವಿದ್ದರೂ,ಸಹ ಅದರ ತೀರ್ಪನ್ನು ತಿರಸ್ಕರಿಸಿ ದಲಿತ ಸಂಘರ್ಷ ಸಮಿತಿ ಹೆಸರಲ್ಲಿ ಕೆಲವರು ಜಿಲ್ಲೆಯಲ್ಲಿ ಹಣ ವಸೂಲಾತಿ  ಶುರುಮಾಡುತ್ತಿದ್ದಾರೆ ಎಂದು ಇಂದು ಅಧಿಕೃತ ದಲಿತ ಸಂಘರ್ಷ ಸಮಿತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ....


ಹೌದು ಶಿವಮೊಗ್ಗ ಜಿಲ್ಲೆ,ಹೊಸನಗರ ತಾಲೂಕು ಮಾರುತಿಪುರ ಪಂಚಾಯತ್ ವ್ಯಾಪ್ತಿಯ ಸೊಪ್ಪಿನಮಲ್ಲಿ ದಲಿತ ಮಹಿಳೆ ಮೇಲೆ ಹಲ್ಲೆ ಪ್ರಕರಣವನ್ನ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ದಲಿತ ಸಂಘರ್ಷ ಸಮಿತಿ ಹೆಸರು ಹೇಳಿಕೊಂಡು ಕೆಲ ವ್ಯಕ್ತಿಗಳು, ಸ್ವಂತ ವಯುಕ್ತಿಕ ಹಿತಾಸಕ್ತಿಗಾಗಿ ಸಂಘಟನೆ ಹೆಸರು ಬಳಸಿಕೊಂಡು,ಧರಣಿ ಸತ್ಯಾಗ್ರಹ ಮಾಡುವುದಾಗಿ,ಹೊಸನಗರ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಊರಿನ ಗ್ರಾಮಸ್ಥರಿಗೆ ಒತ್ತಡ ಹಾಕಿ ಬೆದರಿಕೆ ಒಡ್ಡಿದ್ದು,ಅದಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲಾ  ದಲಿತ ಸಂಘರ್ಷ ಸಮಿತಿ ಸಂಚಾಲಕರು ಆದ ಗುರುಮೂರ್ತಿ ಪತ್ರಿಕಾ ಪ್ರಕಟಣೆ ಹೊರಡಿಸಿ,ಸಂಘಟನೆ ಹೆಸರು ಬಳಸಿ, ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡುತ್ತಿರುವ,ಉಮೇಶ್,ಲಕ್ಷ್ಮಣ್,ಗುರುರಾಜ್,ರವಿ,ಬಂಗಾರಮ್ಮ,ಸುರೇಶ,ಹರೀಶ ಶಾಮ,ಚಂದ್ರಪ್ಪ ಎನ್ನುವವರು ದಲಿತ ಸಂಘರ್ಷ ಸಮಿತಿಯ ಹೆಸರು ಹೇಳಿಕೊಂಡು ಸಾರ್ವಜನಿಕರನ್ನು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಒತ್ತಡ ನೀಡುತ್ತಿರುವ ಇಂತಹ ನಕಲಿ DSS ಕಾರ್ಯಕರ್ತರನ್ನ ಕೂಡಲೇ  ಬಂಧಿಸಿ, ಪೋಲಿಸ್ಇಲಾಖೆ ಇವರ ಮೇಲೆ ಸೂಕ್ತ  ಕಾನೂನು ಕ್ರಮ ಜರುಗಿಸಿ ಎಂದು ತಮ್ಮ ಪತ್ರದ ಮೂಲಕ ದೂರನ್ನ ನೀಡಿದ್ದಾರೆ...









Post a Comment

Previous Post Next Post