ಸಾಗರದಲ್ಲಿ ಇಂದು ಶೃದ್ಧಾಪೂರ್ವಕ ಪೌರಕಾರ್ಮಿಕರ ದಿನಾಚರಣೆ. ಕಾಂಗ್ರೆಸ್ ಅಸಡ್ಡೆ ತೀವ್ರ ಟೀಕೆಗೆ ಗುರಿ

ಸಾಗರ :ಸಾಗರ ನಗರಸಭೆಯ ವತಿಯಿಂದ ಏರ್ಪಡಿಸಿದ,ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶಾಸಕ ಶ್ರೀ ಹರತಾಳು ಹಾಲಪ್ಪನವರು ಉದ್ಘಾಟಿಸಿ,ಪೌರ ಕಾರ್ಮಿಕರನ್ನು ಅವರ ಅವಿರತ ಬೆಲೆ ಕಟ್ಟಲಾಗದ ಸೇವೆಗಾಗಿ  ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಸಾಂಕೇತಿಕವಾಗಿ ಐವರು ಸಿಬ್ಬಂದಿಗಳನ್ನು ಸನ್ಮಾನಿಸಿದರು. ದಿನಾಚರಣೆಯ ಅಂಗವಾಗಿ ನಡೆದ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ  ಸಹ ನಡೆಸಿಕೊಟ್ಟರು.

ನಗರಸಭೆಯ ಎಲ್ಲಾ ಸಿಬ್ಬಂದಿ, ಪೌರನೌಕರಸಂಘದ ಅಧ್ಯಕ್ಷರು & ಉಪಾಧ್ಯಕ್ಷರು, ನೂತನ ನಗರಸಭಾ ಆಯುಕ್ತರು, ನಗರಸಭಾಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಭಾಗವಹಿಸಿದ ಸಮಾರಂಭ ಒಂದು ಉಲ್ಲಾಸಭರಿತ ವಾತಾವರಣದಲ್ಲಿ ಸಾಮಾಪ್ತಿಯಾಯಿತು..

ನಗರಾಡಳಿತದ ಇಂತಹ ಒಂದು ಪ್ರಮುಖ ಕಾರ್ಯಕ್ರಮದ ಆರಂಭಕ್ಕೂ ಮೊದಲೇ ಕಾಂಗ್ರೆಸ್ ಪಕ್ಷದ ಒಂದಿಬ್ಬರು ನಗರಸಭಾ ಸದಸ್ಯರು  ಕಾಟಾಚಾರದ ಭೇಟಿ ನೀಡಿ, ಸಮಾರಂಭದಲ್ಲಿ ಭಾಗವಹಿಸದೆ ತೆರಳಿದ್ದಾರೆ. ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ಧ, ಸದಸ್ಯರು ಆರೋಪಿಸಿದರು.

ಪ್ರತಿನಿತ್ಯ, ಎಲ್ಲಾ ಹಬ್ಬ ಹರಿದಿನಗಳಲ್ಲಿ, ಮಾರಿಜಾತ್ರೆ ಗಣಪತಿ ಜಾತ್ರೆ ಸಂದರ್ಭಗಳಲ್ಲಿ, ಕರೋನಾ ದಂತಹ ಅಪಾಯಕಾರಿ  ಕಾಲದಲ್ಲಿಯೂ ಕೂಡ ತಮ್ಮ ಕುಟುಂಬಗಳ ಜೀವ ಭಧ್ರತೆಯನ್ನು ಲೆಕ್ಕಿಸದೆ,ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿ ನಗರದ  ಸಮಸ್ತ ಜನತೆಯ ಆರೋಗ್ಯ ಕಾಪಾಡಿರುವ ಶ್ರೇಷ್ಠ ಕಾಯಕವನ್ನು ನಿರ್ಲಕ್ಷ್ಯ ಮಾಡಿ ಪೌರಕಾರ್ಮಿಕ ಬಳಗಕ್ಕೆ ಅಪಮಾನ ಮಾಡಿರುವ ಕಾಂಗ್ರೆಸ್ ಪಕ್ಷದ ಈ ಹೀನಾಯ ನಡವಳಿಕೆಯನ್ನು  ಸಾಗರ ನಗರ ಬಿಜೆಪಿ ಅಧ್ಯಕ್ಷ ಶ್ರೀ ಕೆ ಗಣೇಶ ಪ್ರಸಾದ್ , ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ಶೇಟ್ ಮತ್ತು ಶ್ರೀ ಸತೀಶ್ ಮೊಗವೀರ  ತೀವ್ರವಾಗಿ ಖಂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ತನ್ನ ನಡವಳಿಕೆಯನ್ನು ಕಾಂಗ್ರೆಸ್ ತಿದ್ದಿ ಕೊಳ್ಳದಿದ್ದಲ್ಲಿ ಸಾಗರದ ಮಹಾಜನತೆಯೇ ಅವರಿಗೆ ಸೂಕ್ತ ಪಾಠ ಕಲಿಸಲಿದೆ ಎಂದು ಸಹ ತಿಳಿಸಿದ್ದಾರೆ.


ವರದಿ. ಹಾರಾಪೈ ೨೯-೦೯-೨

Post a Comment

Previous Post Next Post