14 ದಿನಗಳ ಕಾಲ ರಾಜ್ಯಬಂದ್ ಮಾಡಿ ಆದೇಶ !!
ಕರ್ನಾಟಕ : ಕೊರೊನ 2ನೇ ಅಲೆಯ ಆರ್ಭಟಕ್ಕೆ ತತ್ತರಿಸಿದ ಕರ್ನಾಟಕ!!!!
ನಾಳೆ ಸಂಜೆಯಿಂದ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ
ಸರಕು ಸಾಮಗ್ರಿ ವಾಹನಗಳು,ತುರ್ತುಪರಿಸ್ಥಿತಿಯ ವಾಹನಗಳಿಗೆ ಯಾವುದೇ ನಿರ್ಬಂಧ ಇಲ್ಲಾ. ಕಟ್ಟಡ ಕಾಮಗಾರಿ, ಉತ್ಪಾದನಾ ವಲಯಗಳು ಎಂದಿನಂತೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ರಾಜ್ಯದ ಸಾರ್ವಜನಿಕ ಸಾರಿಗೆವ್ಯವಸ್ಥೆಯನ್ನೂ ಸಹ ನಿಲ್ಲಿಸಲಾಗುತ್ತದೆ ಗೂಡ್ಸ್ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ
ಅಗತ್ಯ ಸೇವೆಗಳ ಪೂರೈಕೆಗೆ ಯಾವುದೇ ನಿರ್ಬಂಧ ಇಲ್ಲಾ ಮುಂದಿನ ಆದೇಶ ಬರುವವರೆಗೂ ರಾಜ್ಯದ ಎಲ್ಲಾ ಜಿಲ್ಲಾ ಗಡಿ, ರಾಜ್ಯಗಡಿಗಳನ್ನ ಬಂದ್ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ...
ರಾಜ್ಯದ ಜನರ ಆರೋಗ್ಯ ದೃಷ್ಟಿಯಿಂದ ರಾಜ್ಯವನ್ನ ಲಾಕ್ ಡೌನ್ ಮಾಡದೇ ಬೇರೆ ವಿಧಿಯಿಲ್ಲ, ಜನರು ಸಹ ಲಾಕ್ಡೌನ್ ಗೆ ಸಹಕರಿಸಿ, ಸಾಮಾಜಿಕ ಅಂತರ ಕಾಪಾಡಿ ಕೊರೊನ ವೈರಸ್ ತಡೆಗಟ್ಟುವಲ್ಲಿ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ....