ಹೊಸನಗರ -ಸಾಗರ ಸಂಪರ್ಕ ಕಲ್ಪಿಸುವ ಪಟಗುಪ್ಪ ಸೇತುವೆ ಲೋಕಾರ್ಪಣೆ ಕಾರ್ಯಕ್ರಮ....
ಹೊಸನಗರ ತಾಲೂಕು ಕೇಂದ್ರದಿಂದ ಸುಮಾರು ಏಳೆಂಟು ಕಿಲೋಮೀಟರ್ ದೂರದಲ್ಲಿರುವ ಸೇತುವೆ ಶಿವಮೊಗ್ಗದ ಅತೀ ಉದ್ದವಾದ ಸೇತುವೆಗಳಲ್ಲಿ ಒಂದು..!!
ಬಹುಬೇಡಿಕೆಯ ತಾಲೂಕಿನ ಸೇತುವೆಯ ಕನಸು ಇಂದು ನನಸಾಗಿದೆ,.
ಮೊದಲಿದ್ದ ಸೇತುವೆ ಲಿಂಗನಮಕ್ಕಿ ಜಲಾಶಯ ಹಿನ್ನೀರಿನ ಪ್ರಮಾಣ ಹೆಚ್ಚಿದ ಹಿನ್ನೆಲೆ ಮುಳುಗಡೆ ಆದ ನಂತರ ಇಲ್ಲಿನ ಜನರ ಸೇತುವೆ ಬೇಡಿಕೆ ಹೆಚ್ಚಿತು, ಸೇತುವೆಯ ನಿರ್ಮಾಣ ಗಗನ ಕುಸುಮದಂತೆ ಕಂಡರೂ ಸ್ಥಳೀಯ ಜನಪ್ರತಿನಿಧಿಗಳ ಜನರ, ಒತ್ತಾಯಕ್ಕೆ ಹೋರಾಟಕ್ಕೆ ಸೇತುವೆ ನಿರ್ಮಾಣ ಸುದೀರ್ಘ ಸಮಯ ತಗೆದುಕೊಂಡು ಮುಗಿಯುವ ಹಂತಕ್ಕೆ ತಲುಪಿದ್ದು ವಿಶೇಷವೇ ಸರಿ.. !!!""
ಸಂಜೆ 7 ಗಂಟೆಗೆ ಮಾನ್ಯ ಸಂಸದ ಶ್ರೀ ಬಿ.ವೈ.ರಾಘವೇಂದ್ರ ಅವರು ನೂತನ ಸೇತುವೆಯನ್ನು ಉದ್ಘಾಟಿಸಲಿರುವರು. ಶಾಸಕರಾದ ಹರತಾಳು ಹಾಲಪ್ಪ ಹರತಾಳು, ಆರಗ ಜ್ಞಾನೇಂದ್ರ ಸೇರಿದಂತೆ ಹೊಸನಗರ ಎಲ್ಲಾ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ...
ಸುಮಾರು 13 ವರ್ಷಗಳ ಹಿಂದೆ ಶ್ರೀ ಹಾಲಪ್ಪನವರು ಹೊಸನಗರ ಶಾಸಕರಾಗಿದ್ದ ವೇಳೆ ಶಂಕುಸ್ಥಾಪನೆಯಾಗಿದ್ದ ಸೇತುವೆ ಕಾಮಗಾರಿ ಆರಂಭಗೊಂಡ ನಂತರ ಬೇಳೂರು ಗೋಪಾಲಕೃಷ್ಣ, ಮತ್ತು ಕಾಗೋಡು ತಿಮ್ಮಪ್ಪನವರು, ಕ್ಷೇತ್ರ ಪ್ರತಿನಿಧಿಸಿದ್ದರೂ, ಈಗ ಪುನಃ ಅವರು ಶ್ರೀ
ಹಿನ್ನೀರ ಹಬ್ಬ: ಹಬ್ಬ:ಸೇತುವೆ ಉದ್ಘಾಟನಾ ಕಾರ್ಯಕ್ರಮ ಬಲು ವಿಜೃಂಭಣೆಯಿಂದ ಕೂಡಿದ್ದು ಸಮಾರಂಭದಲ್ಲಿ ಆಹಾರಮೇಳ, ಹಾಗೂ ಸಂಗೀತ ಕಾರ್ಯಕ್ರಮ ಮನೋರಂಜನಾ ಕಾರ್ಯಕ್ರಮ ಹಾಗೂ ಸೇತುವೆ ಮೇಲೆ ಸಂಗೀತ ರಸಸಂಜೆ ಕಾರ್ಯಕ್ರಮ ವಿಶೇಷವಾಗಿ Zee ಕನ್ನಡ ವಾಹಿನಿಯ ಖ್ಯಾತಿಯ ಸುಹಾನಾ ಸೈಯದ್ ಅವರ ಗಾಯನ ಕಾರ್ಯಕ್ರಮವೂ ಸಹ ಇರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.....